0

ಪ್ರೀತಿ ಸಾಯುವ ಹಿಂದಿನ ದಿವಸ ಪೂರ್ಣ ಚಂದಿರ ಬಾನಲ್ಲಿ.......

Posted by ರಾಮ್ ನಾಗೇಶ್ on 12:00 ಪೂರ್ವಾಹ್ನ

ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ... ಜಯಂತ ಕಾಯ್ಕಿಣಿ ಬರೆದ ಹಾಡನ್ನು ಗುನುಗುತ್ತಾ ಗೆಳತಿಯ ಬರುವಿಕೆಗೆ ಕಾಯುತ್ತಾ ಕುಳಿತಿದ್ದೆ .... ಒಮ್ಮೆ ಗೆಳತಿ ಬಂದೊಡನೆ ಕಸ್ಕ್ ಅಂತ ನಕ್ಕು ಸುಮ್ಮನಾದ ನಾನು, ಅವಳ ತುಟಿಯಲ್ಲಿ ಮೂಡಿದ ನಗು ಗಮನಿಸಿ.... ನಗುವ ನಯನ ಮಧುರ ಮೌನ.... ಎಂದು ಗುನುಗಿದ ಕೂಡಲೇ ಅವಳ ಕಣ್ಣಂಚಿನಲ್ಲಿ ಬೆಳಕು ಸರಿದಾಡಿದಂತೆ ಭಾಸವಾಗಿ ಅವಳನ್ನೇ ಗಮನಿಸಿದಾಗ - ನಡುಗುತ್ತಿರುವ ಮೈ ಮನ, ಕದಲುತ್ತಿರುವ ಕೂದಲನ್ನು ನೋಡಿ ಏನೋ ವಿಚಿತ್ರ, ಏನೋ ತಲ್ಲಣ, ಯಾಕೋ ಮೌನ ಮನೆ ಮಾಡಿದಂತಾಗಿ, ಭೂಮಿಯ ಜೊತೆ ದೇಹವು ಕಂಪಿಸಿ, ಮಾತನಾಡಲು ಮುಂದಾದ ನಾನು ಸುಮ್ಮನಾದೆ. ಅವಳು ನನ್ನ ಕೈ ಹಿಡಿದು ನನ್ನನು ಮರೆತು ಬಿಡು ಎಂದಾಗ ಮಾತು ಬತ್ತಿ ಹೋಗಿ , ಬರಸಿಡಿಲು ಬಡಿದು, ಕಾರ್ಮೋಡ ಕವಿದು, ತುಂತುರು ಮಳೆ ಹನಿದು, ಕಣ್ಣೀರ ಮರೆ ಮಾಚಿತು. ಅವಳು, ಕಾರಣ ಕೇಳುವ ಮುಂಚೆ ಕಣ್ಮರೆಯಾದಳು.

ಅಂದು ಬಾನಲ್ಲಿ ಚಂದಿರ ನಗುತ್ತಿದ್ದ.

|

0 Comments

ಕಾಮೆಂಟ್‌‌ ಪೋಸ್ಟ್‌ ಮಾಡಿ

Copyright © 2009 ಕಾಮನಬಿಲ್ಲಿನ ಕಾಲ್ಗೆಜ್ಜೆ All rights reserved. Theme by Laptop Geek. | Bloggerized by FalconHive.