0

ಮುಂಜಾವಿನ ಕಿರಣ.......

Posted by ರಾಮ್ ನಾಗೇಶ್ on 11:40 PM
ಮುಂಜಾವಿನ ಕಿರಣ ಕಣ್ಣ ಸೋಕುವ ಮುನ್ನ
ರಾತ್ರಿಯ ತುಂಟಾಟ ನೆನೆದು ನಿದ್ರೆಗೆ ಜಾರುವ ಮುನ್ನ
ಸಂಜೆ ಹೊತ್ತಲ್ಲಿ ಗೆಳತಿಯ ಕೈ ಹಿಡಿದು ತಂಗಾಳಿ ಮೈ ಸೋಕುವ ಮುನ್ನ
ಉರಿ ಬಿಸಿಲ ಲೆಕ್ಕಿಸದೆ ಜಗಳವಾಡುವ ಮುನ್ನ
ಸಂಪರ್ಕಿಸಲು ಪಟ್ಟ ಪಾಡ ಗೆಳತಿಗೆ ತಿಳಿಸುವ ಮುನ್ನ
ಅಪ್ಪನ ಜೇಬಿಗೆ ಕೈ ಬಿಟ್ಟು, ಯಮಹ ಬೈಕ್ ಸ್ಟಾರ್‍ಟ್ ಮಾಡುವ ಮುನ್ನ
ಅಮ್ಮ ಮಾಡಿದ ಚಿತ್ರಾನ್ನ ತಿನ್ನುವ ಮುನ್ನ
ಹಾಸಿಗೆಯಿಂದ ಮೇಲೆದ್ದು ಬಿಸಿ ನೀರು ಮೈ ತಾಕುವ ಮುನ್ನ
ಮುಂಜಾವಿನ ಕಿರಣ ಕಣ್ಣ ಸೋಕುವ ಮುನ್ನ.................

|

0 Comments

ಕಾಮೆಂಟ್‌‌ ಪೋಸ್ಟ್‌ ಮಾಡಿ

Copyright © 2009 ಕಾಮನಬಿಲ್ಲಿನ ಕಾಲ್ಗೆಜ್ಜೆ All rights reserved. Theme by Laptop Geek. | Bloggerized by FalconHive.